ವರ್ಡ್ ಪ್ರೆಸ್ ನ ಪರಿಚಯ (Introduction to WordPress in Kannada language)


ವರ್ಡ್ಪ್ರೆಸ್ ಎಂಬುದು ಒಂದು ಉಚಿತ ಮತ್ತು ಮುಕ್ತ-ಮೂಲದ ಬ್ಲಾಗಿಂಗ್ ಟೂಲ್ ಮತ್ತು ವೆಬ್ ಹೋಸ್ಟಿಂಗ್ ಸೇವೆಗಳಲ್ಲಿ ಕಾರ್ಯ ನಿರ್ವಹಿಸುವ PHP ಮತ್ತು MySQL ಆಧಾರಿತ ವಿಷಯ ನಿರ್ವಹಣಾ ವ್ಯವಸ್ಥೆ (CMS) ಆಗಿದೆ. ಇದೊಂದು ಜಗತ್ತಿನ ಅತ್ಯಂತ ಜನಪ್ರಿಯ CMS. ಮ್ಯಾಟ್ ಮುಲ್ಲೆನ್ ವೆಗ್ ಮತ್ತು ಮೈಕ್ ಲಿಟಲ್ ರಿಂದ ರಚಿತವಾಗಿದೆ. ಇದು ಮುಕ್ತ-ಮೂಲ(Open-source) ತಂತ್ರಾಂಶವಾಗಿದೆ. ಬಳಸಲು, ಮಾರ್ಪಡಿಸಲು, ವಿತರಿಸಲು, ಇತ್ಯಾದಿಗಳಿಗೆ ಉಚಿತ.
ಈ ಕಾರ್ಯಾಗಾರವನ್ನು ಈಗ ತಾನೇ ವರ್ಡ್ಪ್ರೆಸ್ ಕಲಿಯಲಿಚ್ಚಿಸುವವರಿಗಾಗಿ ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ವರ್ಡ್ಪ್ರೆಸ್ ನ್ನು ಸ್ಥಳೀಯವಾಗಿ ಸ್ಥಾಪಿಸಿಕೊಳ್ಳುವುದನ್ನು ಹೇಳಿಕೊಡಲಾಗಿದೆ. ಇದಕ್ಕಾಗಿ ಲೋಕಲ್ ಎಂಬ ತಂತ್ರಾಂಶವನ್ನು ಬಳಸಿಕೊಳ್ಳಲಾಗಿದೆ. ವರ್ಡ್ಪ್ರೆಸ್ ನಲ್ಲಿ ವೆಬ್ಸೈಟ್ ನಿರ್ಮಿಸಲು ಬೇಕಾಗುವ ಥೀಮ್ಗಳು, ಪ್ಲಗಿನ್ಗಳು, ಪುಟ ಮತ್ತು ಲೇಖನಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರವಾಗಿ ತಿಳಿಸಿಕೊಡಲಾಗಿದೆ.

Learning outcomes

  1. ೧. ವರ್ಡ್ಪ್ರೆಸ್ ನ ಪರಿಚಯ ಮತ್ತು ಬಳಸುವಿಕೆ
  2. ೨. ವರ್ಡ್ಪ್ರೆಸ್ ನ್ನು ಸ್ಥಳೀಯವಾಗಿ ಸ್ಥಾಪನೆ
  3. ೩. ಕನ್ನಡದಲ್ಲಿ ವೆಬ್ ಪೇಜ್ ನ ವಿನ್ಯಾಸಗೊಳಿಸುವುದು
  4. ೪. ಫೀಚರ್ಡ್ ಚಿತ್ರವನ್ನು ಪುಟದಲ್ಲಿ ಅಳವಡಿಸುವುದು.
  5. ೫. ಮೆನು ಮತ್ತು ಟ್ಯಾಗ್ ಗಳ ಬಳಸುವುದು

Comprehension questions

  • ೧. ವರ್ಡ್ಪ್ರೆಸ್ ಎಂದರೇನು?
  • ೨. ವರ್ಡ್ಪ್ರೆಸ್ ನ್ನು ರಚಿಸಿದವರಾರು?
  • ೩. ವರ್ಡ್ಪ್ರೆಸ್ ನ್ನು ಸ್ಥಳೀಯವಾಗಿ ಸ್ಥಾಪಿಸುವ ಬಗೆ ಹೇಗೆ?
  • ೪. ವೆಬ್ ಪೇಜ್ ನ್ನು ಕನ್ನಡದಲ್ಲೇ ಮಾಡಬಹುದೇ? ಹೇಗೆ?
  • ೫. ಫೀಚರ್ಡ್ ಚಿತ್ರವನ್ನು ಅಳವಡಿಸುವಿಕೆ ಹೇಗೆ?

Workshop Details


Presenters

WordCamp India 2021
@wordcampindia

WordCamp India is a three weekend regional online WordCamp from Jan 30 – Feb 14.

nsuresha
@nsuresha

Freelance Web designer, Teacher, WordPress #Polyglots contributor, WP Bengaluru Meetup organiser, WP Do-action contributor, WP translation day speaker.